ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಈದ್ಗಾ ಮೈದಾನ ವಿವಾದ ಮತ್ತಷ್ಟು ತಾರಕಕ್ಕೆ ಏರಿದೆ. ವಿವಾದ ಸಂಬಂಧ ಕಾನೂನು ಮೊರೆ ಹೋಗಿರುವ ಬಿಬಿಎಂಪಿ, ವಕ್ಫ್‍ಗೆ ನೋಟಿಸ್ ಜಾರಿ ಮಾಡಿದೆ. ಈದ್ಗಾ ಮೈದಾನ ನಿಮ್ಮದೇ ಆಸ್ತಿ ಅಂತ ಹೇಳಲು ನಿಮ್ಮಲ್ಲಿ ದಾಖಲೆಗಳು ಇದ್ದರೆ.. 2-3 ದಿನಗಳಲ್ಲಿ ಸಲ್ಲಿಸಿ ಅಂತ ಸೂಚನೆ ಕೊಟ್ಟಿದೆ. ಆದ್ರೆ, ವಕ್ಫ್ ಬೋರ್ಡ್ ಮಾತ್ರ ಸದ್ಯ ಯಾವುದೇ ನೋಟಿಸ್ ತಲುಪಿಲ್ಲ ಅಂದಿದೆ. ಈ ಮಧ್ಯೆ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಈದ್ಗಾ ಮೈದಾನದಲ್ಲಿ ಅನುಮತಿ ನೀಡದಿದ್ದರೆ ಕೋರ್ಟ್ ಮೆಟ್ಟಿಲೇರೋದಾಗಿ ಹಿಂದೂ ಸಂಘಟನೆಗಳು ಹೇಳಿವೆ. ಇದಕ್ಕಾಗಿ ಬಿಬಿಎಂಪಿಗೆ 3 ದಿನಗಳ ಡೆಡ್‍ಲೈನ್ ಕೊಟ್ಟಿದೆ.
#publictv #newscafe #hrranganath